ಜುಲೈ ೨ - ಜುಲೈ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೩ನೇ ದಿನ(ಅಧಿಕ ವರ್ಷದಲ್ಲಿ ೧೮೪ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೭೭ - ವೆರ್ಮಾಂಟ್, ಗುಲಾಮಗಿರಿಯನ್ನು ನಿಷೇಧಿಸಿದ ಅಮೇರಿಕ ದೇಶದ ಪ್ರಥಮ ರಾಜ್ಯವಾಯಿತು. ೧೮೫೩ - ರಷ್ಯಾದ ಸೇನೆ ತುರ್ಕಿಯನ್ನು ಆಕ್ರಮಿಸಿ ಕ್ರಿಮಿಯದ ಯುದ್ಧವನ್ನು ಪ್ರಾರಂಭಿಸಿತು. ೧೮೮೧ - ಅಮೇರಿಕ ದೇಶದ ರಾಷ್ಟ್ರಪತಿ ಜೇಮ್ಸ್ ಗಾರ್ಫೀಲ್ಡ್ ಹಂತಕನ ಗುಂಡಿನಿಂದ ಗಾಯಗೊಂಡರು. ೧೯೪೦ - ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಕಲ್ಕತ್ತೆಯಲ್ಲಿ ಬಂಧಿತರಾದರು. ೧೯೭೬ - ೧೯೫೪ರಿಂದ ಬೇರ್ಪಟ್ಟಿದ್ದ ಉತ್ತರ ಮತ್ತು ದಕ್ಷಿಣ ವಿಯೆಟ್ನಾಮ್ಗಳು ವಿಯೆಟ್ನಾಮ್ ಸಮಾಜವಾದಿ ಗಣರಾಜ್ಯವಾಗಿ ಒಂದಾದವು. ೧೯೯೦ - ಮೆಕ್ಕಾದಲ್ಲಿ ಹಜ್ನ ವೇಳೆಯಲ್ಲಿ ಉಂಟಾದ ಜನಗೊಂದಲದಲ್ಲಿ ೧,೪೨೬ ಯಾತ್ರಿಗಳ ಮರಣ. == ಜನನಗಳು == ೧೮೫೬ - ಬಾಲ್ ಗಂಗಾಧರ್ ತಿಲಕ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಖಂಡ. ೧೮೬೨ - ವಿಲಿಯಂ ಬ್ರಾಗ್, ಇಂಗ್ಲೆಂಡ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. ೧೯೦೬ - ಹಾನ್ಸ್ ಬೆತೆ, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. 1981 ಕುಮಾರ ಸುಬ್ರಹ್ಮಣ್ಯ ಭಾರತ, ಕೇರಳ, ಕಾಸರಗೋಡು == ಮರಣಗಳು == ೧೫೬೬ - ನೊಸ್ಟ್ರಡಾಮಸ್, ಫ್ರಾನ್ಸ್ನ ಭವಿಷ್ಯಶಾಸ್ತ್ರ ಪಂಡಿತ. ೧೯೩೭ - ಅಮೇಲಿಯ ಇಯರ್ಹಾಟ್, ಅಮೇರಿಕ ದೇಶದ ವಿಮಾನ ಚಾಲಕಿ. ೧೯೬೧ - ಅರ್ನೆಸ್ಟ್ ಹೆಮಿಂಗ್ವೆ, ಅಮೇರಿಕ ದೇಶದ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ